Wednesday, March 25, 2009

Devara Dasimayya's brief history


ದೇವರ ದಾಸಿಮಯ್ಯರವರು ದೇವಾಂಗ ಜನಾಂಗದ ಕುಲಗುರುವಾಗಿರುವರು. ಇವರು ವಚನಗಳನ್ನು ರಚಿಸಿರುವ ಆದಿಕಾಲದ ಶರಣರಲ್ಲಿ ಮೊದಲಿಗರಾಗಿರುವರು. ಇವರ ಬಗ್ಗೆ ಯಾವ ಕಡೆಯೂ ಹೆಚ್ಚು ಪ್ರಚಲಿತವಿಲ್ಲ ಆಗಾಗಿ ಇವರ ಬಗ್ಗೆ ಸಾಕಷ್ಟು ವಿಷಯಗಳು ತುಂಬಾ ಆಳವಾಗಿ ತಿಳಿದಿಲ್ಲ. ಕೆಲವು ಕಡೆ ಮಾತ್ರ ಇವರ ಬಗ್ಗೆ ಹಲವು ವಿಚಾರಗಳು ಗಮನಕ್ಕೆ ಬಂದಿದೆ. ಇವರು ಹುಟ್ಟಿದ್ದು ಮುದನೂರು. ಇವರ ಜೀವನದ ಕಸುಬು ಬಟ್ಟೆ ನೇಯುವುದು. ಶಿವನ ಧ್ಯಾನ ಮತ್ತು ಅವರ ಕಾಯಕವೇ ಅವರ ಜೀವನದ ಮೂಲವಾಗಿತ್ತು. ಹೀಗೆ ಬಟ್ಟೆ ನೇಯುತ್ತಾ ತನ್ನ ದಿನನಿತ್ಯದ ಕೆಲಸದಲ್ಲಿ ತೊಡಗಿಕೊಂಡು ವಚನಗಳನ್ನು ಸಾಮಾನ್ಯ ಆಡು ಭಾಷೆಯಲ್ಲಿ ರಚಿಸಿದರು. ಆಗಿನ ಪರಿಸ್ಥಿತಿಯಲ್ಲಿ ಆದ್ಯಾವುದೂ ಅಷ್ಟು ಗಣನೀಯವಾಗಿ ಜನಗಳಿಗೆ ಗೊತ್ತಾಗಲಿಲ್ಲ. ನಂತರ ಬಂದ ಶರಣರು ರಚಿಸಿದ ವಚನಗಳು ಹೆಚ್ಚು ಪ್ರಚಲಿತವಾದವು.


ದೇವರ ದಾಸಿಮಯ್ಯನವರು ದುಗ್ಗಳೆ ಎಂಬ ಪತ್ನಿಯನ್ನು ವರಿಸಿ, ಅವಳ ಜೊತೆ ಸಂತೋಷದಿಂದ ಜೀವನವನ್ನು ಸಾಗಿಸುತ್ತಿದ್ದರು, ಆಕೆ ಸಹ ಗಂಡನಿಗೆ ತಕ್ಕ ಪ್ರತಿಕೂಲ ಸತಿಯಾಗಿ ಜೊತೆಗೂಡಿ ಬಾಳುವೆ ನಡೆಸುತ್ತಿದ್ದಳು. ಅವಳ ಸಹಕಾರದಿಂದಲೂ ದಾಸಿಮಯ್ಯನವರಿಗೆ ಹೆಚ್ಚು ಸಹಾಯ ಮತ್ತು ಅನುಕೂಲವೇ ಆಯಿತು. ಪತಿ-ಪತ್ನಿ ಇಬ್ಬರೂ ದೇವರ ಸ್ಮರಣೆಯಲ್ಲಿ ತಮ್ಮ ಕಾಯಕವನ್ನು ನಡೆಸಿಕೊಂಡು ಬರುತ್ತಿದ್ದರು.